ಕಪ್ಪುನೆಲದ ಬೀಜ
ಕಪ್ಪು ನೆಲದ ಬೀಜ
ನನ್ನೊಡಲ ಒಳಗೆ
ಬೇರು ಬಿಡುತ್ತಿದೆ
ಕೆಂಪು ರಾತ್ರಿಯ
ಕರಾಳ ನೆನಪುಗಳು
ಕೊಳ್ಳಿ ಇಡುತ್ತಿವೆ
ಬೇರು ಬಲವಾದಂತೆಲ್ಲ
ಸೂರ್ಯ ಮತ್ತು ನಕ್ಷತ್ರ
ನನ್ನ ಸಂಗಾತಿಯಾಗುತ್ತಾರೆ
ಬೆತ್ತಲೆಯಾದ ಕ್ರಾಂತಿಗಳು
ಕತ್ತಲನ್ನು ಕೊಲ್ಲುತ್ತಿವೆ
Seeds of the Black Soil
The seeds of the black soil
sprout
and spread their roots
within me.
I still have cruel memories
of red nights
set afire.
But as the roots
grow stronger,
the sun and the stars
become my companions.
Even if it is bare-bodied,
Revolution can quell darkness.
It can rewrite history
In the light of tomorrow.
ಎದೆಗೆ ಗುಂಡೇಟು
ಪೆನ್ನಿನ ಎದೆಗೆ
ಗುಂಡಿನ ಏಟು ಕೊಟ್ಟ
ಶತ ಷಂಡರೇ..
ಕೊಂದು ಸಂಭ್ರಮಿಸುವ
ನರ ಹಂತಕರೆ.
ಗುಂಡು ಬೀಳುವ
ನಿಮ್ಮ ಬಂದೂಕಿನ
ತುತ್ತ ತುದಿಯಲಿ
ಗುಬ್ಬಚ್ಚಿ ಗೂಡು ಕಟ್ಟಲಿ.
ಸಿಡಿದ ಗುಂಡಿಗೆ
ನೆಲಕ್ಕುರುಳಿ ಬಿದ್ದಿದ್ದ
ಬರೀ ದೇಹವಲ್ಲ
ನೆಲದ ತಾಯಿಯ ಮಾತೃಕೆ
ಅಕ್ಷರದ ಜೀವಂತಿಕೆ.
ಅಲ್ಲೆಲ್ಲಾ ಚಲ್ಲಿದ್ದು
ರಕ್ತವಲ್ಲ…!
ಸತ್ಯದ ಚರಿತ್ರೆಯ
ಗಟ್ಟಿಗೊಳಿಸುವ
ಪೆನ್ನಿನ ಹಸಿಹಸಿ ಮಸಿ.
ಹನಿಹನಿ ರಕ್ತದ ಕಣಗಳೆಲ್ಲಾ
ಸಾವಿರ ಸತ್ಯಗಳಾಗಿ
ಮತ್ತೆ ಪುನರ್ ಜೀವನಗಂಡಿವೆ.
ಗೊತ್ತು ಬಿಡಿ…ಭಕ್ತರೆ..
ಶಂಬೂಕನ ತಲೆ ಕಡಿದ ಕತ್ತಿ
ಏಕಲವ್ಯನ ಹೆಬ್ಬೆರಳ ಕೊಯ್ದ ಕೈ
ಇಂದು ಬಂದೂಕಾಗಿ
ನನ್ನ ಕೊಂದಿದೆ.
ಮಣ್ಣಲ್ಲಿ ಸುಳ್ಳಿನ ಗೆದ್ದಲಿಡಿಯುತ್ತಿಲ್ಲ
ಮೊಳಕೆ ಹೊಡೆದು
ಸತ್ಯದ ಹೆಮ್ಮರವಾಗುತಿದ್ದೇನೆ.
ಒಂದೆರೆಡು ಗನ್ನುಗಳಿಗೆ
ಸಾವಿರ ಪೆನ್ನಾಗುತ್ತಿದ್ದೇನೆ..
Firing at the Heart of Truth
You cowards —
firing at us who wield pens.
You murderers —
celebrating the cold-hearted killing of innocents.
Let the sparrows
build nests
at your gunpoints.
Your guns may have wounded us.
But we are not just bodies,
Mute bodies.
We are children of the earth,
our mother gives us life with every letter,
strength with every word.
Look, this is not blood we shed
but ink, fresh and indelible,
writing the history of truth.
Every drop of blood now reborn
into a thousand truths.
Listen — I know, you Great Devotees!
I know the sword that chopped Shambuka’s head.
I know who demanded Eklavya’s thumb.
I know the truth: I know that sword.
I know you who became a gun
to kill me.
Listen — lies are not termites
eating away at truth.
Guns cannot destroy it either.
But these pens, these countless pens,
How they grow, tall, strong,
like a gigantic tree of many truths.
ಹೌದು ನಾನು ಸೂಳೆಯಾಗಿದ್ದೇನೆ
ಕತ್ತಲಲ್ಲಿ ಜೊಲ್ಲು ಸುರಿಸುವ
ನಾಯಿನರಿಗಳೆ..
ನನ್ನವ್ವಗೆ ಗಂಡರಾಗುವಿರೊ.?
ಅಥವಾ..
ನನ್ನ ಮಕ್ಕಳಿಗೆ ಅಪ್ಪರಾಗುವಿರೊ…?
ಯಲ್ಲವ್ವನೆಸರಿನಲಿ..
ಮಲ್ಲಿಗೆಗಳನ್ನೆಲ್ಲಾ
ಮಲದ ಮೇಲೆ ಬಿಸಾಡಿದ ಮರ್ಮವನ್ನೆ..ನನಗೆ
ಧರ್ಮ ಮಾಡಿದ್ದು
ನಾನಿನ್ನು ಮರೆತಿಲ್ಲ.
ನಾನಗ ಚಿಕ್ಕವಳಿದ್ದೆ
ಅವ್ವ ಬುಡ್ಡಿ ಬೆಳಕಿನಲಿ ಉಣಿಸುತಿದ್ದಳು.
ನೋವಿನ ಗಂಗಳದಲಿ
ಹಸಿವಿನನ್ನಕ್ಕೆ ಕಾಮದ ಸಾರು ಬಿಡುತ್ತಾ..ಕಣ್ಣೀರಿನಲಿ ಕಲಸುತಿದ್ದಳು.
ನಕ್ಷತ್ರಗಳೆಲ್ಲಾ ನಗುತಿದ್ದರು
ಅವ್ವ ನಗುತ್ತಿರಲಿಲ್ಲ
ನಮ್ಮೆಲ್ಲರನ್ನು ನಗಿಸುತಿದ್ದಳು.
ನಂಗೊತ್ತು
ಇನ್ನು ಗ್ಯಾಪನವಿದೆ
ಮಡಿಮಡಿ ಎಂದಡಿಗಡಿಯುತ್ತಿದ್ದ
ಗುಡಿಪುಜಾರಿ
ಗಡಿಬಿಡಿಗೈದು ನಡುಕತ್ತಲಲಿ ಮನೆಗದ ಬಡಿಯುವಾಗ
ನರನಾಡಿ ಉರಿಗೊಂಡು
ಬರಸಿಡಿಲು ಎದೆಯೇರುತಿದ್ದು
ಹಗಲಲ್ಲಿ
ಸೂಳೆ.ಮಿಂಡ್ರಿ.
ಹಾದ್ರಗಿತ್ತಿಯನ್ನುತ್ತಿದ್ದವರು
ರಾತ್ರಿಯಲಿ
ಸೀತೆ..ಸಾವಿತ್ರಿಯೆನ್ನುತ್ತಾ
ತೆವಲು ತೀರಿಸಿಕೊಳ್ಳುತಿದ್ದು.
ನಾನು ಮಾತಾಡುತ್ತೇನೆ..
ಸಿಕ್ಕಸಿಕ್ಕ ಅಕ್ಕಂದಿರ
ಸೂಳೆಯನ್ನಾಗಿಸಿದ
ಸೂಳೆ ಮಕ್ಕಳ
ಹೆಂಡಿರೇಕೆ ಸೂಳೆಯಾಗಲಿಲ್ಲ..?
ಅಕ್ಕತಂಗಿಯರೇಕೆ.
ಹಾದರಗೈಯಲಿಲ್ಲ…?
ನನ್ನನ್ನು ದಾಸಿಯನ್ನಾಗಿಸಿದ
ಧರ್ಮವೆ.
ಕ್ಯಾಕರಿಸಿ ಉಗುಳುತ್ತೇನೆ.
ನನ್ನ ವೇಶ್ಯೆಯಾಗಿಸಿದ
ದೇವರೆ..
ಎಡಗಾಲಿನೆಕ್ಕಡದೇಟಿನಿಲಿ
ಹೊಡೆಯುತ್ತೇನೆ.
ಧರ್ಮ.ದೇವರ ಹೆಣಗಳ ಮೇಲೆ
ಮುತ್ತುಗಳ ಕೀಳುತ್ತೇನೆ.
ಅಂದು ನಾನು ಮನುಷ್ಯಳಾಗುತ್ತೇನೆ.
Yes, I have become a whore
Drooling in the dark,
you dogs—
Will you become husbands
to my mother?
Or fathers to my children?
In Yallavva’s name,
You throw jasmine, secretly,
on a pile of shit.
Those flowers you give to me.
I haven’t forgotten yet.
I was still a little girl
when Avva fed me, in dull lamplight,
dishes of pain.
Curries of lust and the rice of hunger
she mixed with her tears.
My mother didn’t laugh
Like the stars.
But still, how she made us laugh!
I know.
I still remember.
The temple priest mutters madi-madi
every step of his way,
then his anxious knock comes to the door at midnight.
My pulse rages,
I hear a thunderclap in my heart.
I simmer with anger.
Those people who mouth the words
whore and bitch
in the light of day—
See how their lechery in darkness turns
whore and bitch into
Sita and Savitri.
Let me say this:
You sons of bitches
who have made whores
of my sisters—
Why haven’t any of your wives
become prostitutes?
Why aren’t your sisters
promiscuous women?
Look:
the religion that made me a slave
I spit on it.
You, the god who made me a prostitute
I slap you with the slipper on my left foot!
I pluck pearls out of the corpses of
religion and god
so I can become human.
ಸೂಟು ಬೂಟಿನ ಬಸವ
ಅಂದು ಏಕಾಂತ
ರಸ್ತೆ ಬದಿಯಲಿ ಭಯದ ಪಯಣ
ನನ್ನಲ್ಲೇ ನಾನು ಲೀನವಾದಂತೆ
ನಾನ ತರದ ಚಿಂತೆ.
ಶತಶತಮಾನದಿಂದ ಸಾಹುಕಾರನ
ಚಾಟಿ ಏಟಿಗೆ ಭುಜಬೆನ್ನ ಕೊಟ್ಟ
ನನ್ನಜ್ಜನ ನೆನೆದಾಗ
ಗರ್ಭದೊಳಗೆ ಬೆಂಕಿಯುಂಡೆ
ಉರಿದಂತೆ ಭಾಸ
ನುಂಗಿದಷ್ಟು ನೋವು
ಹಿಂಗದಷ್ಟು ಕಾವು.
ಅರೆಬೆತ್ತಲೆಯಲಿ ನಿಂತು
ಹತ್ತಿ ಬಿಡಿಸುವ ನನ್ನವ್ವಳ
ನೆತ್ತಿ ಸುಡುವ ಸೂರ್ಯನ ಕಂಡಾಗ
ಕೊಂದುಬಿಡಲೆಂಬ ರೋಷ.
ಅನ್ನಕ್ಕಾಗಿ ಅಂಗಲಾಚಿ
ದೇಹವನ್ನು ಮಾರಿಕೊಂಡು
ಕಸದಲ್ಲಿ ಎಸೆದ ಹಸುಗೂಸೆ
ಹಸಿದ ನಾಯಿಗೆ ಮಾಂಸವಾದರೆ
ತಾಯಿಗೇಕೆ ತಾಯ್ತನ???
ಕಾಯುತ್ತಿದ್ದೇನೆ ನಾನು
ಮಸಣದ ಮೌನದ ಗೋರಿಯೊಳಗೆ
ಬುದ್ದನನ್ನು ಬಧಟಿಯಾಗಲು.
ಮತ್ತೆ ಬರುವನೆ..?
ಅವನು
ಸೂಟುಬೂಟಿನ ಬಸವ
ಇಂಗ್ಲೀಷಿನಲಿ ಮಾತಾಡುತ
ಮತ್ತೆ ಘರ್ಜಿಸುತ.
Suit-boot Basava
I am alone, lonely, afraid
as I walk the street
lost in the thoughts haunting me.
A ball of fire keeps me company,
the memory of centuries:
my ancestors lashed by the whips of the rich and powerful.
I could kill
when I see the scorching sun scald my mother’s back
as she plucks cotton in the field,
or as she begs, or sells her body
to feed her newborn child.
But why be a mother
if it only makes her food for hungry hounds?
I wait,
silently,
deep down in a tomb
for the Buddha.
Will he come again?
Will he come, my Suit-Boot Basava
roaring,
speaking in English?
ಬೋಟಿಸಾರು ಮತ್ತು ಬಿರಾನಿ
ಮುಂದ್ಲು ಮನಿ ಸಾಂತವ್ವ
ಸಾಬ್ರು ಸಮಾದಣ್ಣನ ಮಂಸದಂಗಡಿಗೋಗಿ
ತಲೆಮೇಲೆ ಕರ್ಸ ಇಳಿಸ್ಕೆಂತ
ಬೋಟಿ ಹೊತ್ಗಂಡು
ಹಗಲೇರೆ ದಾಟ್ಕೆಂದೆ ಬಂದ್ಲು.
ಬರ್ರೆ…ಇಳಸ್ಕೊಳ್ರೆ…
ಏನ್ ನೆಣವಾಗಿದೆ
ನಾಕ್ ಮಂದಿ ಸೇರ್ಕೊಂಡ್ರೆ ಅಡವಾಗ್ತದೆ..ಇಲ್ದಿದ್ರೆ
ಮೈಗತ್ತಲ್ಲ ಕೈಗತ್ತಲ್ಲ
ಕುದಿಕುದಿ ಅನ್ನಂಗಾಯ್ತದೆ..
ಲಕ್ಸಮವ್ವ.ಕೆಂಚಸಣವ್ವ.
ಹನುಮದಡವ್ವ.ಸಾಂತವ್ವ
ಸಾಕ್ ಕರೆಟ್ ಆದ್ರು…
ಬಿದ್ರಿನ್ ಪುಟ್ಯಾಗಿದ್ದ
ಬೋಟಿನ ಕೊಯ್ದು
ಪಾಲ್ ನೋಡಲು..
ಗೊಣ್ಣೆ ಬಿಟ್ಕಂಡು
ಬಾಯ್ ತೆರ್ಕೊಂಡ್ ಸುತ್ತಾಮುತ್ತಾ ಕುಂತ
ಕೇರಿ ಹುಡ್ರು ದಂಡೆ ಐತೆ.
ಮಾತಂಗಿ ಗಲ್ಲೆಮುಂದೆ
ಕಳ್ಳುಗಳನ್ನೆಲ್ಲಾ ಈಚಿ
ಗರೆಕಡ್ಡಿಯಿಂದ ತಿರ್ವಿ ತೊಳ್ದು
ಪಡ್ಪಚ್ಚಿ ಗಡ್ಪಚ್ಚಿನ ಕೊಡ್ವಿ
ದೊಮ್ಮೆನ ಪರಕ್ಕನೆ ಕೊಯ್ದು
ನಾಕ್ ಜನ್ರಿಗೆ ನಾಕ್ ಪಾಲು.
ನಮ್ಗೆ ಕಮ್ಮಿ ರೇಟ್ಗೆ ಸಿಗೊ
ಮಾಂಸವಂದ್ರೆ ಬೋಟಿನೆ.
ಎಲ್ರು ನಮ್ ಮಟಾನ್ ತಿನ್ನೊದ್ರಿಂದಲೆ
ರೇಟ್ ಜಾಸ್ತಿ ಮಾಡ್ಯಾರಂತೆ.
ಎಲ್ಡ್ ಕೆಜಿ ಮಾಂಸ ತಂದ್ರೆ
ಎಲ್ಡ್ ಮನ್ಯಾರು ತಿಂತಾರೆ
ಅಡವಾಗಿ ಬೋಟಿ ತಂದ್ರೆ
ನಾಕ್ ಮನಿಗೆ ಸಾರ್ ಕೊಟ್ಟು
ಘನ್ವಾಗಿ ಉಣ್ಬೊದು
ಕೇರಿ ಕೆಂಚವ್ವಳ ಲೆಖ್ಖಚಾರ.
ಒಲಿಮ್ಯಾಗ ಬೋಟಿಸಾರು
ಕೊತಕೊತ ಕುದಿಬೇಕಾದ್ರೆ
ಘಮ್ಮೆನ್ನೊ ವಾಸ್ನೆ
ಉಪ್ಪಾರಟ್ಟಿ ಕುರುಬ್ರು ಕೇರಿ
ದಾಟ್ಕಂಡು ಐನರ್ ಕೇರಿಗೋಯ್ತದೆ.
ಬೋಟಿಸಾರು ಬಲುರುಚಿ
ಸಾರ್ ಮಾಡ್ದೋರ ಮನೆಮುಂದೆ
ತಟ್ಟೆ ಇಡ್ಕೊಂಡು …
ಸಾಲ್ಗಟ್ಟುವ ಸರೀಕ್ರೆ ಜಾಸ್ತಿ.
ನಾವ್ ಸಣ್ಣರಿದ್ದಾಗ
ಸಾಬ್ರಟ್ಯಾಗ ಮದ್ವಿ ಮುಂಜಿ ಆದ್ರೆ
ಬಿರಾನಿ ನಿಡಿಸ್ಕಣಕೆ
ಬೆಸೆನ್ ತಗೊಂಡ್ ಹೋಗ್ತಿದ್ವಿ.
ಪುಣ್ಯಾತ್ಮಾರು
ಬೇಸೆನ್ ತುಂಬ ಬಿರಾನಿ ನಿಡೋರು
ರಂಜಾನ್ ಬಕ್ರೀದ್ ಬಂತಂದ್ರೆ
ಮಾದ್ರಟ್ಟಿಗಿ ಮಾರೆಬ್ಬ
ಅಮ್ಮಾ ಅಂದ್ರೆ ಬಿರಾನಿ.ಪಾಯ್ಸ.ಸೇರ್ವಾ
ಅಣ್ಣಾ ಅಂದ್ರೆ ದುಡ್ ಕೊಡ್ತಿದ್ರು
ಊರಳರ್ ಮದ್ವೇಲಿ ಊಟುಕ್ಕೋದ್ರೆ ಮುಲಾಜಿಲ್ದೆಎಬ್ರಿಸೋರು
ಬಿಗ್ರುಬಿಜ್ರು ಉಂಡುಳುದ್ರೆ
ಕೊನಿಗ್ಬನ್ನಿ ಅಂತಿದ್ರು.
ನಮ್ ತಲೆಮಾರು
ಬಾರಿ ಭಿಕ್ಷೆ ಬೇಡ್ತು
ನಿಡಿಸ್ಕಂಡ್ ಬರೋಕೆ
ತಾ ಮುಂದ್ ನಾ ಮುಂದ್
ಅಂತಾ ಹೊಡ್ದಾಡಿ ನೀಡೆಸ್ಕೆಂತೆದ್ವಿ.
ನಾಯಿ ಕಡ್ದು ನದ್ರಿಲ್ಲಾ
ಸಾಬ್ರು ಮನಿ ಬಿರಾನಿ
ಮಾದ್ರು ಮನಿ ಬೋಟಿಸಾರು
ನೆನಸ್ಕೊಂಡ್ರೆ ಇಗ್ಲೊ
ಬಾಯ್ತುಂಬ ಜೊಲ್ಲು..
Boti curry and Biryani
Next-door Saantavva
went to saabru Samaadanna’s meat shop,
left with boti1 in the basket on her head.
She walked past upper caste households,
dirty sweat rolling down her face.
Come, help me put down the basket of boti.
Look how rich the meat is
and we can afford it if we share,
Laksmavva, Kenchasanavva
Hanumadadavva, Santavva–
Enough! The number four is perfect.
And here they are, so many unwashed boys
gathering around the bamboo basket,
eager to watch the boti getting ready
to be shared among four.
Matangi scrubs the goat intestine with a stick,
then washes it with water. How well she does it!
Now she can cut it into
four perfect pieces.
Boti, the most inexpensive meat
for the likes of us.
But when everyone began eating our meat
the prices began to soar.
Buy two kg meat,
calculates Keri Kenchavva,
that’s enough for just two households.
But boti –
will make curry for four households.
Besides that aroma
as boti curry is cooked—
it’s irresistible, as it wafts past
to reach ainora keri4
The taste matches the aroma.
People queue up with plates
In front of the houses
Where the boti curry has been made.
When young,
we would go to Muslim weddings
with basins
which would be filled to the brim with biryani.
Ramzan and Bakrid are like
the Mari festival for Madaratti
You get biryani, payasa and serva if you cry ‘Amma’
Coins if you cry ‘Anna’.
But at an upper caste wedding,
we would be pushed away.
Come later, they would say,
You can have the leftovers.
How much we have begged for food,
quarreled over it.
Even a snarling dog or its bite
would not keep us from looking for food.
Biryani from Muslims,
Boti curry from Madru5 households
The thought of it
Makes me drool all over again.